ಬೆಂಗಳೂರು: ಜಾಗತಿಕ ಮಹಾಮಾರಿ ಕೋವಿಡ್-19 ಗೆ ವಿಶ್ವದ ಮೊದಲ ಲಸಿಕೆ ಸಿದ್ಧವಾಗಿದೆ ಎಂಬ ರಷ್ಯಾ ಅಧ್ಯಕ್ಷ ವ್ಲಾದಿಮಿರ್
ಪುಟಿನ್ ಹೇಳಿಕೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸ್ವಾಗತಿಸಿದ್ದಾರೆ.
ರಷ್ಯಾದಲ್ಲಿ ವ್ಲಾದಿಮಿರ್ ಪುಟಿನ್ ಅವರ ಮಗಳಿಗೂ ಸಹ ಕೋವಿಡ್ ಲಸಿಕೆಯನ್ನು ನೀಡಲಾಗಿದ್ದು, ಲಸಿಕೆ ಬಳಕೆಗೆ ಸಿದ್ಧವಾಗಿರುವುದು
ಸಂತಸದ ಸಂಗತಿ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡಾ. ಸುಧಾಕರ್, ರಷ್ಯಾದಲ್ಲಿ ಎರಡು ಮತ್ತು ಮೂರನೇ ಹಂತದಲ್ಲಿ 38 ಜನರಿಗೆ ಲಸಿಕೆ ಹಾಕಿದ್ದು,
ಇವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ಹೇಳಿದೆ, ಇಡೀ ವಿಶ್ವಕ್ಕೆ ಇದು ಸಂತಸ ತರುವ ಸುದ್ದಿ ಎಂದು ಹೇಳಿದ್ದಾರೆ.