ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಕೃಷಿಗೆ ಬಳಸುವ ಔಷಧಗಳ ಪೈಕಿ ಸುಮಾರು 175 ಮಾದರಿಗಳು ಕಳಪೆಯಾಗಿರುವುದು ಬೆಳಕಿಗೆ ಬಂದಿವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಬಹಿರಂಗ ಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಪಂ ಸಭಾಂಗಣದಲ್ಲಿ ಮಂಗಳವಾರ ಕೃಷಿ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೃಷಿಗೆ ಬಳಸುವ ಔಷಧಗಳು ಪರಿಣಾಮವಾಗಿಲ್ಲ. ಬಹಳಷ್ಟು ಕಳಪೆ ಆಗಿವೆ ಎಂಬ ರೈತರಿಂದ ಬಂದ ದೂರಿನ ಆಧಾರದಲ್ಲಿ ಕೃಷಿ ಇಲಾಖೆ ಸುಮಾರು 370 ಔಷಧ ಮಾದರಿಗಳನ್ನು ಪರೀಕ್ಷಿಸಿದಾಗ ಅದರಲ್ಲಿ 175 ಔಷಧಗಳು ಕಳಪೆ ಆಗಿವೆ ಎಂದು ಕೃಷಿ ಸಚಿವರು ಬಹಿರಂಗಪಡಿಸಿದರು.
ಈಗಾಗಲೇ ಕಳಪೆ ಔಷಧಿ ವಿತರಿಸಿದವರ ವಿರುದ್ಧ ದೂರು ದಾಖಲಾಗಿದೆ. ರೈತರಿಗೆ ಯಾರೇ ವಂಚನೆ ಅಥವಾ ಮೋಸ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.
Source : UNI
Follow us on Social media