ಬೆಂಗಳೂರು: ರಾಜ್ಯದಲ್ಲಿ ಮಂಗಳಾರ ಮತ್ತೆ 10 ಹೊಸ ಕೊರೋನಾ ಸೋಂಕಿತ ಪ್ರಕರಣಗಳ ಪತ್ತೆಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 418ಕ್ಕೇರಿಕೆಯಾಗಿದೆ.
ಇಂದು ಬೆಳಗ್ಗೆ ಏಳು ಮಂದಿಗೆ ಹಾಗೂ ಸಂಜೆ ಮೂವರಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಸೋಂಕಿನಿಂದ ಇಲ್ಲಿಯವರೆಗೆ 17 ಜನರು ಮೃತಪಟ್ಟಿದ್ದು, 129 ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಬಂಟ್ವಾಳ, ದಕ್ಷಿಣ ಕನ್ನಡ ಜಿಲ್ಲೆಯ 67 ವರ್ಷದ ವೃದ್ಧೆ, ವಿಜಯಪುರದ 18 ಹಾಗೂ 30 ವರ್ಷದ ಮಹಿಳೆ, ಕಲಬುರಗಿಯ 29 ,61 ಹಾಗೂ 80 ವರ್ಷ ವ್ಯಕ್ತಿಗಳು, ವಿಜಯಪುರದ 18 ವರ್ಷದ ಯುವತಿ, ಮೈಸೂರು ನಂಜನಗೂಡಿನ 26 ವರ್ಷದ ಇಬ್ಬರು ವ್ಯಕ್ತಿಗಳು, ಬೆಳಗಾವಿಯ 25 ವರ್ಷದ ಯುವತಿಯಲ್ಲಿ ಇಂದು ಸೋಂಕು ದೃಢಪಟ್ಟಿದೆ.
ಬೆಂಗಳೂರು ನಗರದಲ್ಲಿ ಇಲ್ಲಿಯವರೆಗೆ 89 ಜನರಲ್ಲಿ ಸೋಂಕು ವರದಿಯಾಗಿದ್ದು, 48 ಜನರು ಗುಣಮುಖರಾಗಿದ್ದಾರೆ. ಮೈಸೂರಿನಲ್ಲಿ 86 ಪ್ರಕರಣಗಳು ಕಂಡುಬಂದಿದೆ. ಬೆಳಗಾವಿಯಲ್ಲಿ 43, ವಿಜಯಪುರದಲ್ಲಿ 35, ಕಲಬುರಗಿಯಲ್ಲಿ 30, ಬಾಗಲಕೋಟೆಯಲ್ಲಿ 21, ಚಿಕ್ಕಬಳ್ಳಾಪುರದಲ್ಲಿ 16, ಬೀದರ್ ನಲ್ಲಿ 15, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 16, ಬಳ್ಳಾರಿಯಲ್ಲಿ 13, ಬೆಂಗಳೂರು ಗ್ರಾಮಾಂತರ 12, ಮಂಡ್ಯದಲ್ಲಿ 12, ಉತ್ತರ ಕನ್ನಡದಲ್ಲಿ 11, ಧಾರವಾಡದಲ್ಲಿ 7, ಗದಗದಲ್ಲಿ 4, ಉಡುಪಿಯಲ್ಲಿ 3, ದಾವಣಗೆರೆಯಲ್ಲಿ 2, ತುಮಕೂರಿನಲ್ಲಿ 2. ಚಿತ್ರದುರ್ಗದಲ್ಲಿ 1 ಹಾಗೂ ಕೊಡಗಿನಲ್ಲಿ 1 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.
Follow us on Social media