ಮುಂಬೈ: ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿಪೂಜೆಯ ಅಗತ್ಯವಿರಲಿಲ್ಲ. ಪರಿಸ್ಥಿತಿ ಸಹಜತೆಗೆ ಬಂದಾಗ ಆಯೋಜನೆ ಮಾಡಬಹುದಿತ್ತು ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರ ಇ- ಭೂಮಿಪೂಜೆ ಸಲಹೆಯನ್ನು ಸಹ ತಿರಸ್ಕರಿಸಿರುವ ರಾಜ್ ಠಾಕ್ರೆ, ಶಿಲಾನ್ಯಾಸ ಸಮಾರಂಭವನ್ನು ಬಹಳ ಉತ್ಸಾಹದಿಂದ ನಡೆಸಬೇಕು ಎಂದಿದ್ದಾರೆ.
ಮಠಾಠಿಯ ನ್ಯೂಸ್ ಚಾನೆಲ್ ವೊಂದರ ಜೊತೆಗೆ ಮಾತನಾಡಿದ ಎಂಎನ್ ಎಸ್ ಮುಖ್ಯಸ್ಥ, ಜನರು ವಿವಿಧ ಮನಸ್ಥಿತಿಯಲ್ಲಿರುವ ಈ ಸಂದರ್ಭದಲ್ಲಿ ಭೂಮಿ ಪೂಜೆ ಅಗತ್ಯವಿರಲಿಲ್ಲ. ಎರಡು ತಿಂಗಳ ನಂತರ ಸಹಜ ಪರಿಸ್ಥಿತಿವೇರ್ಪಟ್ಟಿದ್ದಾಗ ಸಮಾರಂಭ ನಡೆಸಬಹುದಾಗಿತ್ತು. ಆಗ ಜನರು ಕೂಡಾ ಉತ್ಸಾಹದಿಂದ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ಹೇಳಿದರು.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರ ಪ್ರಕಾರ ರಾಮ ಮಂದಿರ ಕಟ್ಟಡ ನಿರ್ಮಾಣದ ಭೂಮಿಪೂಜೆ ನೆರವೇರಿಸಲು ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಆಗಮಿಸುವ ಸಾಧ್ಯತೆಯಿದೆ.
Follow us on Social media