ಮಡಿಕೇರಿ: ಇಲ್ಲಿನ ಕಾವೇರಿ ತೀಥ೯ಕ್ಷೇತ್ರ ತಲಕಾವೇರಿಯಲ್ಲಿ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿದ್ದು, ತಲಕಾವೇರಿ ಕ್ಷೇತ್ರದ ಪ್ರಧಾನ ಅಚ೯ಕ ಟಿ.ಎಸ್.ನಾರಾಯಣ ಆಚಾರ್, ಅವರ ಪತ್ನಿ, ಆನಂದತೀಥ೯ ಮತ್ತು ಇಬ್ಬರು ಅಚ೯ಕರು ನಾಪತ್ತೆಯಾಗಿದ್ದಾರೆ.
ತಲಕಾವೇರಿ ಪುಣ್ಯ ಕ್ಷೇತ್ರ ಬಳಿಯಲ್ಲಿ ಭೂಕುಸಿತದಿಂದಾಗಿ ಎರಡು ಮನೆಗಳು ಸಂಪೂಣ೯ ಮಣ್ಣುಪಾಲಾಗಿವೆ, ಮಣ್ಣಿನಡಿ ಸಿಲುಕಿರುವವರ ರಕ್ಷಣೆಗೆ ಸ್ಥಳೀಯರೊಂದಿಗೆ ವಿಪತ್ತು ನಿರ್ವಹಣಾ ಪಡೆ ಕೂಡ ಕಾಯಾ೯ಚರಣೆ ನಡೆಸುತ್ತಿದೆ.
ಸುಮಾರು 6 ಕಿ.ಮೀ. ಉದ್ದಕ್ಕೆ ಬೆಟ್ಟಸಾಲು ಕುಸಿದು ಸಂಭವಿಸಿದ ಈ ದುರಂತದಲ್ಲಿ ಎರಡು ಕಾರು, 20 ಕ್ಕೂ ಹೆಚ್ಚು ಹಸುಗಳು ಕಾಣೆಯಾಗಿವೆ.
ಭಾರೀ ಮಂಜು ಮತ್ತು ಮಳೆಯಿಂದಾಗಿ ರಕ್ಷಣಾ ಕಾಯಾ೯ಚರಣೆಗೆ ತೊಡಕಾಗಿದೆ. ಭಾಗಮಂಡಲ – ತಲಕಾವೇರಿ ರಸ್ತೆಯಲ್ಲಿ ಅಲ್ಲಲ್ಲಿ ಭೂಕುಸಿತ ಉಂಟಾಗಿರುವುದರಿಂದ ರಕ್ಷಣಾ ಕಾಯ೯ಪಡೆಯ ವಾಹನಗಳೂ ವೇಗವಾಗಿ ಸ್ಥಳಕ್ಕೆ ತೆರಳಲು ಅಡ್ಡಿಯಾಗಿವೆ. ಸ್ಥಳದಲ್ಲಿ ಸ್ಥಳೀಯರು ಕಾರ್ಯಾಚರಣೆ ಆರಂಭಿಸಿದ್ದಾರೆ.
Follow us on Social media