ಮಡಿಕೇರಿ: ಕೊಡಗಿನಲ್ಲಿ ಭಾರೀ ಭೂಕಂಪವಾಗುತ್ತದೆ, ಜಿಲ್ಲೆಯು ನೆಲಸಮವಾಗಲಿದೆ ಎಂದು ಭವಿಷ್ಯ ನುಡಿಇದ್ದ ಪ್ರಖ್ಯಾತ ಜ್ಯೋತಿಷಿ ಬ್ರಂಹ್ಮಾಂಡ ಗುರೂಜಿ ನಾಗೇಂದ್ರ ಬಾಬು ಶರ್ಮಾ ಅವರ ವಿರುದ್ಧ ಕೊಡಗಿನಲ್ಲಿ ಪೋಲೀಸ್ ದೂರು ದಾಖಲಾಗಿದೆ.
ತಮ್ಮ ಮಾತುಗಳಿಂದ ಜಿಲ್ಲೆಯ ಜನತೆಯಲ್ಲಿ ಆತಂಕ ಮೂಡಿಸಿರುವ ಬ್ರಹ್ಮಾಂಡ ಗುರೂಜಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಲಬೇಕೆಂದು ಕೊಡಗಿ ಬೆಳೆಗಾರರ ಒಕ್ಕೂಟವು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಇನ್ನು ಇತ್ತೀಚೆಗೆ ಕೊರೋನಾ ಪರಿಣಾಮದ ಕುರಿತು ಭವಿಷ್ಯ ನುಡಿದಿದ್ದ ಬ್ರಹ್ಮಾಂಡ ಗುರೂಜಿ ಕೊರೋನಾದಿಂದ ಪಾರಾಗಲು ದ್ವರ ಮೊರೆ ಹೋಗುವುದೊಂದೇ ಪರಿಹಾರ ಎಂದಿದ್ದರು. ಮಾತ್ರವಲ್ಲದೆ ಎರಡು ವ್ರ್ಷಗಳ ಹಿಂದಿನ ಅತಿವೃಷ್ಟಿಯಿಂದ ಸರಿಯಾಗಿ ಚೇತರಿಸಿಕೊಳ್ಲದ ಕೊಡಗಿನಲ್ಲಿ ಮತ್ತೆ ಭಯಾನಕ ಭೂಕಂಪವಾಗಲಿದೆ. ಜಿಲ್ಲೆಯ ನಾನಾ ಭಾಗಗಳು, ಊರುಗಳು ನೆಲಸಮವಾಗಲಿದೆ ಎಂದಿದ್ದರು.
ಹೆಸರಾಂತ ಜ್ಯೋತಿಷಿಗಳಾಗಿರುವ ಗುರೂಜಿಯವರ ಮಾತುಗಳು ಸಮಾಜದ ಜನರಲ್ಲಿ ಭಯ, ಆತಂಕಕ್ಕೆ ಕಾರಣವಾಗುತ್ತಿದ್ದು ಇದಕ್ಕಾಗಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ದೂರಿನಲ್ಲಿ ಕೋರಲಾಗಿದೆ.
Follow us on Social media