ಕಾಸರಗೋಡು: ಅಪರಾಧವೊಂದರಲ್ಲಿ ಬಂಧಿಸಲ್ಪಟ್ಟ ಆರೋಪಿಯೊಬ್ಬ ಸ್ಥಳ ಪರಿಶೀಲನೆಗಾಗಿ ಕಾಸರಗೋಡು ಬಂದರಿಗೆ ಕರೆತಂದ ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ಜುಲೈ 22 ರಂದು ಸಮುದ್ರಕ್ಕೆ ಹಾರಿ ತಪ್ಪಿಸಿಕೊಂಡಿದ್ದ. ಇದೀಗ ಆತನ ಮೃತದೇಹ ಉಡುಪಿ ಬಳಿಯ ಬೀಚ್ನಲ್ಲಿ ಪತ್ತೆಯಾಗಿದೆ .
ಕಾಸರಗೋಡು ಕುಡ್ಲು ನಿವಾಸಿ ಮಹೇಶ್ (28) ಜುಲೈ 22 ರಂದು ಸಮುದ್ರಕ್ಕೆ ಹಾರಿದ ಆರೋಪಿ. ಕಾಸರ್ಗೋಡು ಬಂದರಿನ ಬಳಿ ಸ್ಥಳ ಪರಿಶೀಲನೆ ನಡೆಸಲು ಕರೆತಂದ ಬೆಂಗಾವಲು ಪೊಲೀಸ್ ಸಿಬ್ಬಂದಿಗಳಿಂದ ತಪ್ಪಿಸಿಕೊಂಡಿದ್ದ ಮಹೇಶ್ ಮೃತದೇಹವಿಂದು ಪತ್ತೆಯಾಗಿದೆ. ಆತನನ್ನು ರಕ್ಷಿಸಲು . ಪೊಲೀಸ್ ಸಿಬ್ಬಂದಿ ಸಾಕಷ್ಟು ಪ್ರಯತ್ನಿಸಿದರೂ ಆತ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಸ್ಥಳೀಯರೊಂದಿಗೆ ಮುಳುಗು ತಜ್ಞರು ಮತ್ತು ಕರಾವಳಿ ಸಂರಕ್ಷಣಾ ಪಡೆ ಸಿಬ್ಬಂದಿ ಮಹೇಶ್ ನನ್ನು ಹುಡುಕಿದ್ದರು ಆದರೆ ಪ್ರಯತ್ನಗಳು ವ್ಯರ್ಥವಾಯಿತು. ಉದುಪಿ ಬಳಿಯ ಬೀಚ್ನಲ್ಲಿ ಆರೋಪಿಗಳ ಕೊಳೆತ ಶವ ಬುಧವಾರ ಪತ್ತೆಯಾಗಿದೆ. ಉಡುಪಿ ಪೊಲೀಸರು ನೀಡಿದ ಮಾಹಿತಿಯಂತೆ ಶವವನ್ನು ಸಂಗ್ರಹಿಸಲು ಕಾಸರಗೋಡು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಶವವನ್ನು ಉಡುಗೆ ಮತ್ತು ದೇಹದ ಕೈಯಲ್ಲಿದ್ದ ಕೈಕೋಳದಿಂದ ಆರೋಪಿಯ ದೇಹ ಎಂದು ಗುರುತಿಸಲಾಗಿದೆ.
ಶೌಚಾಲಯದಲ್ಲಿ ಅಪ್ರಾಪ್ತ ಬಾಲಕಿಯ ದೃಶ್ಯವನ್ನು ವಿಡಿಯೋ ಚಿತ್ರೀಕರಿಸಿದ ಆರೋಪದ ಮೇಲೆ ಕಾಸರಗೋಡು ನಗರ ಪೊಲೀಸರು ಮಹೇಶನನ್ನು ಬಂಧಿಸಿದ್ದರು. ಕಾಸರಗೋಡು ಬಂದರಿನ ಬಳಿಯ ಬಂಡೆಯ ಕೆಳಗೆ ಅಪ್ರಾಪ್ತ ಬಾಲಕಿಯ ಆಕ್ಷೇಪಾರ್ಹ ದೃಶ್ಯವನ್ನು ಸೆರೆಹಿಡಿದಿದ್ದ ಮೊಬೈಲ್ ಅನ್ನು ತಾನು ಅಡಗಿಸಿಟ್ಟಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಮೊಬೈಲ್ ಬಂಡೆಯ ಕೆಳಗೆ ಪತ್ತೆಯಾಗಿದ್ದು, ನಂತರ ಪೊಲೀಸರು ಜಪ್ತಿ ಮಾಡಿದ್ದಾರೆ.
Follow us on Social media