ಕಾಸರಗೋಡು : ಜಿಲ್ಲೆಯಲ್ಲಿ ಶನಿವಾರ 73 ಮಂದಿಗೆ ಕೊರೋನಾ ಪಾಸಿಟಿವ್ ದ್ರಢಪಟ್ಟಿದ್ದು , 70 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದೆ . ಹೊರರಾಜ್ಯ ದಿಂದ ಬಂದ ಮೂವರಿಗೆ ಸೋಂಕು ಪತ್ತೆಯಾಗಿದೆ .33 ಮಂದಿ ಗುಣಮುಖರಾಗಿ ಬಿಡುಗಡೆ ಗೊಂಡಿದ್ದಾರೆ . 4504 ಮಂದಿ ನಿಗಾದಲ್ಲಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 2,588 ಮಂದಿಗೆ ಸೋಂಕು ತಗಳಿದ್ದು . ಈ ಪೈಕಿ 1103 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ 1476 ಮಂದಿ ಗುಣಮುಖರಾಗಿದ್ದಾರೆ .
ಇದುವರೆಗೆ 9 ಮಂದಿ ಬಲಿಯಾಗಿದ್ದಾರೆ . ಶನಿವಾರ ಕಾಸರಗೋಡು ನಾಗರಾಭಾ ವ್ಯಾಪ್ತಿಯಲ್ಲಿ 16, ತ್ರಿಕ್ಕರಿಪುರ 10, ಕುಂಬಳೆ 5, ಮಂಗಲ್ಪಾಡಿ ಮತ್ತು ಮಂಜೇಶ್ವರ ತಲಾ 4, ಮಧೂರು , ಚೆಮ್ನಾಡ್ ತಲಾ 3, ಚೆಂಗಳ , ಮೊಗ್ರಾಲ್ ಪುತ್ತೂರು ಮೊದಲಾದೆಡೆ ತಲಾ ಒಬ್ಬರಿಗೆ ಸೂನ್ಕು ಪತ್ತೆಯಾಗಿದೆ ನಾಲ್ವರು ಆರೋಗ್ಯ ಸಿಬಂದಿಗಳಿಗೆ ಸೋಂಕು ಕಾಸರಗೋಡು : ಕಾಸರಗೋಡು ನಗರಸಭೆಯ ಇಬ್ಬರು ಆರೋಗ್ಯ ಸಿಬಂದಿಗಳಿಗೆ ಶನಿವಾರ ಸೋಂಕು ದ್ರಢಪಟ್ಟಿದೆ. ಚೆಂಗಳ , ತ್ರಿಕ್ಕರಿಪುರ ಗ್ರಾಮ ಪಂಚಾಯತ್ ಆರೋಗ್ಯ ಸಿಬಂದಿಗಳಿಗೆ ಕೊರೋನಾ ಸೋಂಕು ದ್ರಢಪಟ್ಟಿದೆ
Follow us on Social media