ಬೆಂಗಳೂರು: ಕರ್ನಾಟಕದಲ್ಲಿ ಇಂದು ಕೊರೋನಾ ಮಹಾಮಾರಿ ತ್ರಿಶತಕ ಬಾರಿಸಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 6,824ಕ್ಕೆ ಏರಿಕೆಯಾಗಿದೆ. ಇನ್ನು ಮೂವರು ಕೊರೋನಾಗೆ ಬಲಿಯಾಗಿದ್ದಾರೆ.
ಕರ್ನಾಟಕದಲ್ಲಿ ಇಂದು 308 ಪ್ರಕರಣ ಪತ್ತೆಯಾಗಿದೆ. ಇನ್ನು 3 ಮಂದಿ ಮಹಾಮಾರಿಗೆ ಬಲಿಯಾಗಿದ್ದು ಸಾವಿನ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 6,824ಕ್ಕೆ ಏರಿಕೆಯಾಗಿದೆ.
ಕಲಬುರಗಿಯಲ್ಲಿ 67, ಯಾದಗಿರಿಯಲ್ಲಿ 52, ಬೀದರ್ ನಲ್ಲಿ 42, ಬೆಂಗಳೂರು 31, ದಕ್ಷಿಣ ಕನ್ನಡದಲ್ಲಿ 30, ಧಾರವಾಡದಲ್ಲಿ 20, ಉಡುಪಿಯಲ್ಲಿ 14, ಹಾಸನದಲ್ಲಿ, ಬಳ್ಳಾರಿಯಲ್ಲಿ ತಲಾ 11, ವಿಜಯಪುರದಲ್ಲಿ 6, ರಾಯಚೂರು, ಉತ್ತರಕನ್ನಡದಲ್ಲಿ ತಲಾ 5, ಕೋಲಾರದಲ್ಲಿ 4, ದಾವಣಗೆರೆಯಲ್ಲಿ 3, ಮಂಡ್ಯ, ಹಾವೇರಿಯಲ್ಲಿ 2, ಮೈಸೂರು,ಬಾಗಲಕೋಟೆ, ರಾಮನಗರದಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲಿ 6,824 ಪ್ರಕರಣಗಳ ಪೈಕಿ 3,648 ಮಂದಿ ಗುಣಮುಖರಾಗಿದ್ದಾರೆ. ಇನ್ನು 3,092 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Follow us on Social media