ಕೋಲಾರ : ಲಾಕ್ ಡೌನ್ ಸಡಿಲಿಕೆ ನಂತರ ಒಂದು ವಾರ ನಡೆದ ಮದ್ಯ ಮಾರಾಟದ ವಹಿವಾಟಿನಲ್ಲಿ 1000 ಕೋಟಿ ರೂ ಆದಾಯ ದೊರೆತಿದೆ ಎಂದು ಅಬಕಾರಿ ಸಚಿವ ಎಚ್ ನಾಗೇಶ್ ಹೇಳಿದ್ದಾರೆ.
ಕೋಲಾರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 42 ದಿನಗಳ ಲಾಕ್ ಡೌನ್ ಅವಧಿಯಲ್ಲಿ 3 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದರು.
ಪ್ರಸಕ್ತ ಸಾಲಿಗೆ 22,500 ಕೋಟಿ ರೂ ಗುರಿಯಿದ್ದು ಶೇ. 17 ರಷ್ಟು ಅಬಕಾರಿ ಸುಂಕ ಹೆಚ್ಚಳದಿಂದ ೨೫೦೦ ಕೋಟಿ ರೂ ಹೆಚ್ಚುವರಿ ಆದಾಯ ಸಿಗಲಿದ್ದು ಒಟ್ಟು 25000 ಗುರಿ ಹೊಂದಿದಂತಾಗಿದೆ ಎಂದರು.
ಲಾಕ್ ಡೌನ್ ಸಡಿಲಿಸಲಾಗಿದೆ ಎಂದು ಶಿಸ್ತು ಪಾಲಿಸುವುದನ್ನು ಮರೆತರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೋಲಾರ ಗಡಿ ಭಾಗವಾಗಿದ್ದು ನೆರೆಯ ರಾಜ್ಯಗಳಿಂದ ಜನರು ಮದ್ಯ ಖರೀದಿಸಲು ನುಸುಳುವ ಅಪಾಯವಿದ್ದು ಗಡಿಯಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ.
ಅಲ್ಲದೇ ಗಡಿಯಲ್ಲಿನ ಮದ್ಯದಂಗಡಿಗಳು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿದ್ದು ಇತರೆಡೆ ಆಧಾರ್ ಕಾರ್ಡ್ ನಲ್ಲಿ ವಿಳಾಸ ಪರಿಶೀಲಿಸಿ ನಂತರವಷ್ಟೇ ಮದ್ಯ ನೀಡಲಾಗುತ್ತಿದೆ ಎಂದು ಸಚಿವ ನಾಗೇಶ್ ವಿವರಿಸಿದ್ದಾರೆ.
Follow us on Social media