ಅಬುಧಾಬಿ: ಸೂರ್ಯಕುಮಾರ್ ಯಾದವ್ ಆಕರ್ಷಕ ಅರ್ಧಶತಕದ ನೆರವಿನಿಂದ 13ನೇ ಆವೃತ್ತಿ ಐಪಿಎಲ್ ನ 48ನೇ ಪಂದ್ಯದಲ್ಲಿ ಆರ್.ಸಿ.ಬಿ. ವಿರುದ್ಧಐದು ವಿಕೆಟ್ ಜಯ ಸಾಧಿಸಿದೆ. ಈ ಜಯದೊಡನೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿರುವ ಮುಂಬೈ ಪ್ಲೇ ಆಫ್ ಗೆ ಸಹ ಲಗ್ಗೆ ಇಟ್ಟಿದೆ.
165 ರನ್ ಗುರಿ ಬೆನ್ನಟ್ಟಿದ ಮುಂಬೈ ಸೂರ್ಯಕುಮಾರ್ ಯಾದವ್ ಅಜೇಯ 79, ಇಶಾನ್ ಕಿಶನ್ 25 ರನ್ ನೆರವಿನಿಂದ 19.1 ಓವರ್ ಗಳಲ್ಲಿ ಐದು ವಿಕೆಟ್ ಗೆ 166 ರನ್ ಸೇರಿಸಿ ಗೆಲುವು ದಾಖಲಿಸಿತು.
ಆರ್.ಸಿ.ಬಿ. ಪರ ಸಿರಾಜ್, ಚಹಾಲ್ ತಲಾ 2 ವಿಕೆಟ್ ಪಡೆಇದ್ದಾರೆ.
ಇದಕ್ಕೆ ಮುನ್ನ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿ ಪರ ದೇವದತ್ ಪಡೀಕ್ಕಲ್ ಹಾಗೂ ಫಿಲಿಪ್ ಜೋಡಿ 71 ರನ್ ಗಳಿಸಿತ್ತು. ಫಿಲಿಪ್ 33 , ಪಡಿಕಲ್ 74, ಎಬಿಡಿ 15, ಗುರುಕೀರತ್ ಸಿಂಗ್ 10, ವಾಷಿಂಗ್ಟನ್ ಸುಂದರ್ 10 ರನ್ ಗಳಿಸಿದ್ದರು.ಮುಂಬೈ ಪರ ಬುಮ್ರಾ 3 ವಿಕೆಟ್ ಪಡೆದಿದ್ದರು,
Follow us on Social media