ಬೆಂಗಳೂರು: ರಾಜ್ಯಾದ್ಯಂತ ಕೊರೊನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಬಾರ್, ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳು ಮುಚ್ಚುವ ಸಾಧ್ಯತೆಯಿದೆ. ಅಲ್ಲದೆ ಕೆಲವು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಏಪ್ರಿಲ್ 8ರ ಗುರುವಾರ ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಮಾತನಾಡಿ, “ಕರ್ಫ್ಯೂ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಇರುತ್ತದೆ.” ಎಂದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ನಡುವಿನ ಚರ್ಚೆಯ ನಂತರ ಯೆಡಿಯೂರಪ್ಪ ಅವರು ಬೆಂಗಳೂರು, ತುಮಕೂರು, ಮೈಸೂರು, ಬೀದರ್,ಉಡುಪಿ, ಮಣಿಪಾಲ, ಮಂಗಳೂರು ಮತ್ತು ಕಲಬುರಗಿ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಇದು ಕೇವಲ ಪ್ರಾಯೋಗಿಕ ಜಾರಿಯಾಗಿದ್ದು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರವೇ ನಿಯಮ ಜಾರಿಯಾಗುತ್ತದೆ, ಅಗತ್ಯ ಸೇವೆ ಹೊರತಾಗಿ ಎಲ್ಲಾ ಕಮರ್ಷಿಯಲ್ ಚಟಿವಟಿಕೆಗಳೂ ನಿರ್ಬಂಧಕ್ಕೊಳಗಾಗಲಿದೆ ಎಂದರು.
Follow us on Social media