ಬೆಂಗಳೂರು : ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಪ್ರಸಕ್ತ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದೆ. ಈ ಕುರಿತು ಪ್ರೌಢ ಶಿಕ್ಷಣ ಸಚಿವರು ಸುದ್ದಿಗೋಷ್ಟಿ ನಡೆಸಿ ಫಲಿತಾಂಶದ ಮಾಹಿತಿ ನೀಡುತ್ತಿದ್ದಾರೆ. 625/625 ಪಡೆದು ಈ ಬಾರಿ ಆರು ಮಂದಿ ಮೊದಲ ರ್ಯಾಂಕ್ ಪಡೆದಿದ್ದಾರೆ. ಒಟ್ಟಾರೆ ಶೇ. 71.81 ಫಲಿತಾಂಶ ಈ ಬಾರಿ ಬಂದಿದೆ. ಇದು ಕಳೆದ ಬಾರಿ ಶೇ.73.70 ರಷ್ಟು ಫಲಿತಾಂಶ ಬಂದಿತ್ತು.
ಇಲಾಖೆಯ ಅಧಿಕೃತ ಜಾಲತಾಣಗಳಾದ kseeb.kar.nic.in ಅಥವಾ karresults.nic.in ನಲ್ಲಿಯೂ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದು. ಫಲಿತಾಂಶ ತಿಳಿಯಲು ಯಾವುದೇ ಸಂಖ್ಯೆಗೆ ವಿದ್ಯಾರ್ಥಿಗಳು ಎಸ್‌ಎಂಎಸ್ ಕಳುಹಿಸುವ ಅಗತ್ಯವಿಲ್ಲ. ಮಂಡಳಿಯೇ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಉಚಿತವಾಗಿ ಕಳಿಸಲಿದೆ. ನೆಟ್ ವರ್ಕ್ ಸಮಸ್ಯೆ ಆಗದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ. ಕೊರೋನಾ ಸೋಂಕಿನ ಭೀತಿಯ ನಡುವೆಯೂ 8,48,203 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಲಾಕ್ ಡೌನ್ ಮುಗಿದ ಬಳಿಕ ಇಂಗ್ಲೀಷ್ ಪರೀಕ್ಷೆ ನಡೆಸಲಾಗಿತ್ತು.
Follow us on Social media