ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿದಾಯ ಘೋಷಿಸಿದ ಬೆನ್ನಲ್ಲೇ ಸುರೇಶ್ ರೈನಾ ಸಹ ಗುಡ್ ಬೈ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಸುರೇಶ್ ರೈನಾ ನಿವೃತ್ತಿ ಬಗ್ಗೆ ಘೋಷಿಸಿದ್ದಾರೆ. 2005ರಲ್ಲಿ ಸುರೇಶ್ ರೈನಾ ಕ್ರಿಕೆಟ್ ಬದುಕಿಗೆ ಪಾದಾರ್ಪಣೆ ಮಾಡಿದ್ದರು.
ಸುರೇಶ್ ರೈನಾ 226 ಏಕದಿನ ಪಂದ್ಯಗಳನ್ನು ಆಡಿದ್ದು 5,615 ರನ್ ಬಾರಿಸಿದ್ದಾರೆ. ಇನ್ನು 78 ಟಿ20 ಪಂದ್ಯಗಳಲ್ಲಿ 1,605 ರನ್ ಬಾರಿಸಿದ್ದಾರೆ. 19 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 768 ರನ್ ಬಾರಿಸಿದ್ದಾರೆ.
Follow us on Social media