ಬೆಂಗಳೂರು: ಸದಾ ಮಾಸ್ಕ್, ಗ್ಲೌಸ್ ಧರಿಸುವುದು, ಯಾವಾಗಲೂ ಬಿಸಿನೀರು ಕುಡಿಯುವುದು ಸೇರಿದಂತೆ ಉಪ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ತಮ್ಮ ಮತ್ತು ತಮ್ಮ ಜೊತೆಗಿರುವವರ ಸುರಕ್ಷತೆಗಾಗಿ ಎರಡು ದಿನಕ್ಕೊಮ್ಮೆ ಕೋವಿಡ್ 19 ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಅಭ್ಯರ್ಥಿಗಳಾಗಿರುವ ನಾವು ಮತ ಕೇಳಲು ಹಲವು ದನರ ಜೊತೆ ಮಾತನಾಡಬೇಕಾಗುತ್ತದೆ, ಇನ್ನೂ ವರ್ಚ್ಯೂಯಲ್ ವೇದಿಕೆ ತಲುಪಲು ಸಾಧ್ಯವಾಗಿಲ್ಲ, ಹಿಗಾಗಿ ವಯಕ್ತಿಕವಾಗಿ ತೆರಳಿ ಮತಯಾಚಿಸುವುದೊಂದೇ ನಮಗಿರುವ ಆಯ್ಕೆ, ಜೊತೆಗೆ ವಿಧಾನಸಭೆಗಿಂತ ಪರಿಷತ್ ಚುನಾವಣಾ ಕ್ಷೇತ್ರದ ದೊಡ್ಡದಾಗಿರುತ್ತದೆ, ಹಾಗಾಗಿ ಹೆಚ್ಚಿನ ಕ್ಷೇತ್ರಗಳಿಗೆ ಸಂಚರಿಸಬೇಕು ಎಂದು ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು ಹೇಳಿದ್ದಾರೆ.
ಚುನಾವಣೆ ಗೆಲ್ಲುವುದು ತುಂಬಾ ಕಷ್ಟ, ತಮ್ಮ ಮತದಾರರನ್ನು ಭೇಟಿಯಾಗದೇ ಇರುವುದು ಸಾಧ್ಯವಿಲ್ಲ, ಜನರು ತಮ್ಮ ಬಳಿ ಬಂದು ಹಾರ ಹಾಕಿ ಫೋಟೋ ತೆಗೆಸಿಕೊಳ್ಳುತ್ತಾರೆ, ಅದನ್ನು ನಾವು ಬೇಡ ಎನ್ನಲಾಗುದು, ಏಕೆಂದರೆ ಪ್ರತಿಯೊಂದು ಮತವು ನಮಗೆ ಮುಖ್ಯ. ಯಾವುದೇ ಒಬ್ಬ ಬೆಂಬಲಿಗನನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
ಶಿರಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚುನಾವಣೆಗೆ ಸ್ಪರ್ಧಿಸಿರುವ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಎರಡು ಮೂರು ದಿನಗಳಿಗೊಮ್ಮೆ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ, ಏಕೆಂದರೇ ಅಭ್ಯರ್ಥಿಗಳಿಗೆ ಸೋಂಕು ತಗುಲಿದರೇ ಅವರೇ ಸೂಪರ್ ಸ್ಪ್ರೆಡರ್ ಗಳಾಗುತ್ತಾರೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಎರಡು ದಿನಕ್ಕೊಮ್ಮೆ ಕಡ್ಡಾಯವಾಗಿ ಕೊರೋನಾ ಪರೀಕ್ಷೆ ಮಾಡಿಸುವುದು ಆದೇಶವಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ ಸಂಜೀವ್ ಕುಮಾರ್ ಹೇಳಿದ್ದಾರೆ. ಎಂಎಚ್‌ಎ ಅಥವಾ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಯಾವುದೇ ಮಾರ್ಗಸೂಚಿಗಳನ್ನು ಹೊರಡಿಸಿಲ್ಲ ಎಂದು ಅವರು ಹೇಳಿದರು. ಶೀಘ್ರವೇ ಕರ್ನಾಟಕ ಸರ್ಕಾರ ಅಥವಾ ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿ ಹೊರಡಿಸಲಿದೆ ಎಂದು ತಿಳಿಸಿದ್ದಾರೆ.
Follow us on Social media