Breaking News

ಉಡುಪಿ : ಕೊರೋನಾ ಲಾಕ್’ಡೌನ್ ವೇಳೆ ಬಾವಿ ತೋಡಿದ ಪವರ್ ಲಿಫ್ಟರ್ ಅಕ್ಷತಾ ಪೂಜಾರಿ!

ಉಡುಪಿ: ಲಾಕ್’ಡೌನ್ ವೇಳೆ ಸಮಯವನ್ನು ವ್ಯರ್ಥ ಮಾಡುತ್ತಿರುವ ಜನರೇ ಹೆಚ್ಚಾಗಿದ್ದು, ಇಂತಹ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಅಂತರಾಷ್ಟ್ರೀಯ ಖ್ಯಾತಿಯ ಪವರ್ ಲಿಫ್ಟರ್ ಅಕ್ಷತಾ ಪೂಜಾರಿಯವರು, ಬಾವಿ ಕೊರೆದು ಫಿಟ್ನೆಸ್ ಕಾಪಾಡಿಕೊಳ್ಳುವುದರ ಜೊತೆಗೆ, ಇದರಿಂದ ನೀರೂ ಕೂಡ ಸಿಕ್ಕಿದೆ. 

ಬೋಳ ಗ್ರಾಮದಲ್ಲಿರುವ ಮನೆಯ ಅಂಗಳದಲ್ಲಿ ತಮ್ಮ ಇಬ್ಬರು ಸಹೋದರ ಹಾಗೂ ಅವರ ಸಹೋದರಿ ಮಕ್ಕಳೊಂದಿಗೆ ಸೇರಿಕೊಂಡು ಅಕ್ಷತಾ ಅವರು ಬಾವಿ ತೋಡಿದ್ದು, ಪರಿಣಾಮ ನೀರು ದೊರಕಿದೆ. ಇದೀಗ ತಮ್ಮ ಶ್ರಮಕ್ಕೆ ಪ್ರತಿಫಲ ದೊರಕಿದ ಖುಷಿಯಲ್ಲಿ ಅಕ್ಷತಾ ಇದ್ದಾರೆ. 

ಬೇಸಿಗೆ ಆರಂಭವಾಗಿದ್ದು, ಈಗಾಗಲೇ ಕಾರ್ಕಳದಲ್ಲಿ ನೀರಿಗಾಗಿ ಹಾಹಾಕಾರ ಎದುರಾಗುತ್ತಿದೆ. ಪ್ರತೀದಿನ ಅಕ್ಷತಾ ಅವರು ತಮಮ ಸ್ಕೂಟಿಗೆ ಕೊಡಗಳನ್ನು ಕಟ್ಟಿಕೊಂಡು ಕಿ.ಮೀ ದೂರದಿಂದ ನೀರೆಳೆದು ತರುತ್ತಿದ್ದರು. ಹೀಗಾಗಿ ನೀರಿನ ಸಂಕಷ್ಟ ಆರಂಭವಾದ ಹಿನ್ನೆಲೆಯಲ್ಲಿ ಮನೆಯ ಪಕ್ಕದಲ್ಲಿಯೇ ಬಾವಿಯನ್ನ ತೋಡಿದರೆ ಹೇಗೆ ಎಂಬ ಆಲೋಚನೆ ಹೊಳೆದಿತ್ತು. ಹೀಗಾಗಿ ಮೂವರು ಅಣ್ಣಂದಿರೊಂದಿಗೆ ಕೂಡಿಕೊಂಡು ಬಾವಿ ತೋಡಲು ಆರಂಭಿಸಿದ್ದೆವು. 

ಏ.18 ರಿಂದ ಬಾವಿ ಅಗೆಯಲು ಆರಂಭಿಸಿದ್ದೆವು. ಸತತ 6 ದಿನಗಳ ಕಾಲ ಅಗೆದಿದ್ದೆವು. ಎಷ್ಟು ಆಳದಲ್ಲಿ ನೀರು ಸಿಗುತ್ತದೆ ಎಂಬ ಕಲ್ಪನೆ ಕೂಡ ನಮಗಿರಲಿಲ್ಲ. ಏ.24ರವರೆಗೂ ಸುಮಾರು 25 ಅಡಿ ಅಗೆದರೂ ನೀರು ಸಿಗಲಿಲ್ಲ. ಬೇಸರವಾಗಿತ್ತು. ಸಂಜೆ 5 ಗಂಟೆಗೆ ಕೆಲಸ ಮುಗಿಸುವ ವೇಳೆ ಬಾವಿಯ ಒಂದು ಮೂಲೆಯಿಂದ ನೀರು ಬರಲು ಆರಂಭವಾಯಿತು. ಇದರಿಂದ ಮನೆಯ ದೊಡ್ಡ ಸಮಸ್ಯೆ ನಿವಾರಣೆಯಾದಂತಾಯಿತು ಎಂದು ಅಕ್ಷತಾ ಅವರು ತಿಳಿಸಿದ್ದಾರೆ. 

ಲಾಕ್’ಡೌನ್ ಪರಿಣಾಮ ಜಿಮ್ಮಿಗೆ ಹೋಗಿ ವರ್ಕೌಂಟ್ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಬಾವಿ ತೋಡಿದ್ದು, ಜಿಮ್ಮಿಗಿಂತಲೂ ಹೆಚ್ಚು ವರ್ಕೌಟ್ ಮಾಡಿದಂತಾಯಿತು. ನಿತ್ಯ ಬಾವಿಯಿಂದ ನೀರೆಳೆಯುವುದು ಇನ್ನೂ ಒಳ್ಳೆಯ ವ್ಯಾಯಾ ಎಂದು ಅಕ್ಷತಾ ತಿಳಿಸಿದ್ದಾರೆ. 

ಅಕ್ಷತಾ ಅವರು ರಾಜ್ಯ ಮಟ್ಟದಲ್ಲಿ 10 ಚಿನ್ನ, 2 ಬೆಳ್ಳಿ ಪದಕಗಳೊಂದಿಗೆ 5 ಬಾರಿ ಸ್ಟ್ರಾಂಗ್ ವುಮನ್ ಪ್ರಶಸ್ತಿ, ರಾಷ್ಟ್ರ ಮಟ್ಟದಲ್ಲಿ 10 ಚಿನ್ನ, 2 ಬೆಳ್ಳಿ ಪದಕಗಳೊಂದಿಗೆ 4 ಬಾರಿ ಸ್ಟ್ರಾಂಗ್ ವುಮನ್ ಪ್ರಶಸ್ತಿ ಗೆದ್ದಿದ್ದಾರೆ. ಏಷ್ಯಾ ಮಟ್ಟದಲ್ಲೂ 4 ಬಾರಿ ಚಿನ್ನ, ಕಾಮನ್ ವೆಲ್ತ್ ಕೂಡದಲ್ಲಿ 8 ಚಿನ್ನ, ವಿಶ್ವ ಮಟ್ಟದಲ್ಲಿ 2 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. 

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×