ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ನ 13ನೇ ಆವೃತ್ತಿಯ ಟಿ20 ಟೂರ್ನಿಗೆ ಚೀನಾ ಮೂಲದ ಮೊಬೈಲ್ ಕಂಪನಿ ವಿವೊ ಪ್ರಾಯೋಜಕತ್ವ ಇರುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿದೆ.
ಭಾರತ ಮತ್ತು ಚೀನಾ ನಡುವಿನ ಗಡಿಯಲ್ಲಿ ಇತ್ತೀಚಿಗೆ ಸಂಘರ್ಷ ನಡೆದಿತ್ತು. ಆಗ ಭಾರತದಲ್ಲಿ ಚೀನಾ ಮೂಲದ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನ ಆರಂಭಗೊಂಡಿತ್ತು.
ಅಲ್ಲದೆ ಚೀನಾ ಆ್ಯಪ್ ಗಳನ್ನು ಕೇಂದ್ರ ಸರ್ಕಾರವೇ ನಿಷೇಧಿತು. ಹೀಗಾಗಿ ಐಪಿಎಲ್ ಗೆ ಪ್ರಾಯೋಕತ್ವ ಹೊಂದಿರುವ ವಿವೊವನ್ನು ಬಿಡಬೇಕು ಎಂಬ ಆಗ್ರಹ ಬಂದ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.
ಎರಡು ದಿನಗಳ ಹಿಂದಷ್ಟೇ ಐಪಿಎಲ್ ಪ್ರಾಯೋಜಕತ್ವದಿಂದ ಹಿಂದೆ ಸರಿಯುತ್ತಿರುವುದಾಗಿ ವಿವೊ ಕಂಪನಿ ಹೇಳಿತ್ತು. ಈ ಬಾರಿಯ ಐಪಿಎಲ್ ಟೂರ್ನಿಯ ಪ್ರಾಯೋಜಕತ್ವವನ್ನು ತಡೆ ಇಡಿಯಲು ಬಿಸಿಸಿಐ ಮತ್ತು ವಿವೊ ಪರಸ್ಪರ ಒಮ್ಮತ್ತಕ್ಕೆ ಬಂದಿವೆ ಎಂದು ಬಿಸಿಸಿಐ ಹೇಳಿದೆ. 2022ರವರೆಗೆ 2190 ಕೋಟಿ ರೂ. ಮೊತ್ತದ ಒಪ್ಪಂದ ಇದಾಗಿದೆ.
Follow us on Social media