ಬೆಂಗಳೂರು: ರಾಜ್ಯಕ್ಕೆ ವೈದ್ಯಕೀಯ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸಿಎಂ ಯಡಿಯೂರಪ್ಪ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಪತ್ರ ಬರೆದಿದ್ದಾರೆ.
ಈಗ ಕೇಂದ್ರ ಸರ್ಕಾರ 300 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸುತ್ತಿದ್ದು, ಬೇಡಿಕೆಗಿಂತ ಕಡಿಮೆಯಿದೆ ಎಂದು ಮೂಲಗಳು ತಿಳಿಸಿವೆ. ಕರ್ನಾಟಕದಲ್ಲಿ 7 ಲಿಕ್ವಿಡ್ ಆಕ್ಸಿಜನ್ ಘಟಕಗಳಿವೆ, ಪ್ರತಿದಿನ ಇವೆಲ್ಲ ಸೇರಿ ಒಟ್ಟು 812 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದಿಸುತ್ತವೆ. ಇದನ್ನು ಹೊರತು ಪಡಿಸಿ ಕೇಂದ್ರ ಸರ್ಕಾರ 300 ಟನ್ ಆಕ್ಸಿಜನ್ ಪೂರೈಸುತ್ತಿದೆ.
ಕೇಂದ್ರ ಹಂಚಿಕೆಯ ಪ್ರಕಾರ ಉಳಿದ ಆಮ್ಲಜನಕವನ್ನು ಇತರ ರಾಜ್ಯಗಳಿಗೆ ವಿತರಿಸಲಾಗುವುದು. ಆಮ್ಲಜನಕದ ತೀವ್ರ ಕೊರತೆಯಿಂದ ಬಳಲುತ್ತಿರುವ ರಾಜ್ಯಕ್ಕೆ ಇದು ಸಾಕಾಗುವುದಿಲ್ಲ. ಕರ್ನಾಟಕಕ್ಕೆ ಎರಡು ದಿನಕ್ಕೊಮ್ಮೆ 1,100 ಟನ್ ಆಕ್ಸಿಜನ್ ಅಗತ್ಯವಿದೆ. ಶನಿವಾರದವರೆಗೆ ಕರ್ನಾಟಕ 279 ಟನ್ ಆಮ್ಲಜನಕವನ್ನು ಕೊರೋನಾ ರೋಗಿಗಳಿಗಾಗಿ ಉಪಯೋಗಿಸಿದೆ.
ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ಪ್ರಸ್ತುತ ಹೆಚ್ಚಳವನ್ನು ಗಮನಿಸಿದರೆ ಸದ್ಯಕ್ಕೆ ದಿನಕ್ಕೆ 1,100 ಟನ್ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ. ಅಲ್ಪ ಪ್ರಮಾಣದ ಆಮ್ಲಜನಕ ಹಂಚಿಕೆಯೊಂದಿಗೆ ಕರ್ನಾಟಕ ಸರ್ಕಾರವು ಆಸ್ಪತ್ರೆಗಳಲ್ಲಿ, ವಿಶೇಷವಾಗಿ ಸಣ್ಣ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟನ್ನು ಎದುರಿಸಲು ವೈದ್ಯಕೀಯ ದರ್ಜೆಯ ಆಮ್ಲಜನಕದ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.
ಸೋಮವಾರ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮತ್ತು ಆರೋಗ್ಯ ಸಚಿವ ಡಿ ಸುಧಾಕರ್ ಅವರು ಆಮ್ಲಜನಕದ ತಯಾರಕರನ್ನು ಭೇಟಿಯಾಗಿ ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಕೈಗಾರಿಕಾ ದರ್ಜೆಯ ಆಮ್ಲಜನಕವನ್ನು ವೈದ್ಯಕೀಯ ದರ್ಜೆಯ ಆಮ್ಲಜನಕಕ್ಕೆ ತಿರುಗಿಸಲು ಸೂಚಿಸಿದ್ದಾರೆ.
ಸಾಗಣೆ ಮತ್ತು ಆಮ್ಲಜನಕದ ವಿತರಣೆಯನ್ನು ಸುಗಮಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 94 ಟ್ಯಾಂಕರ್‌ಗಳಿದ್ದು, ಅವುಗಳಲ್ಲಿ 45 ಆಮ್ಲಜನಕವನ್ನು ಸಾಗಾಟ ಮಾಡುತ್ತವೆ, ಆಮ್ಲಜನಕ ಪೂರೈಕೆಗಾಗಿ ನಾವು ಇನ್ನೂ ಕೆಲವು ಟ್ಯಾಂಕರ್‌ಗಳನ್ನು ಪುನಃ ಜೋಡಿಸಬಹುದೇ ಎಂದು ನಾವು ಪರಿಶೀಲಿಸುತ್ತಿದ್ದೇವೆ ”ಎಂದು ಮೂಲ ತಿಳಿಸಿದೆ.
ಕರ್ನಾಟಕದ ಏಳು ಆಮ್ಲಜನಕ ಸ್ಥಾವರಗಳಲ್ಲಿ, ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ನಾಲ್ಕು – ಏರ್ ವಾಟರ್ ಇಂಡಿಯಾ (ಹಿಂದೆ ಲಿಂಡೆ ಇಂಡಿಯಾ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು), ಜೆಎಸ್‌ಡಬ್ಲ್ಯೂ ಇಂಡಸ್ಟ್ರಿಯಲ್ ಗ್ಯಾಸ್ ಪ್ರೈವೇಟ್ ಲಿಮಿಟೆಡ್, ಪ್ರಾಕ್ಸೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಬಳ್ಳಾರಿ ಆಕ್ಸಿಜನ್ ಕಂಪನಿ. ಯೂನಿವರ್ಸಲ್ ಏರ್ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್ ಮತ್ತು ಭೋರುಕಾ ಗ್ಯಾಸ್ ಲಿಮಿಟೆಡ್ ಬೆಂಗಳೂರಿನಲ್ಲಿವೆ ಮತ್ತು ಪ್ರಾಕ್ಸೇರ್ ಕೊಪ್ಪಳದಲ್ಲಿ ಮತ್ತೊಂದು ಸ್ಥಾವರವನ್ನು ಹೊಂದಿದೆ.
ಕೆಲವು “ತಾಂತ್ರಿಕ” ಕಾರಣಗಳಿಂದಾಗಿ ಆಮ್ಲಜನಕ ಕೋಟಾವನ್ನು ಬಳ್ಳಾರಿಯಿಂದ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. “ನಾವು ಈ ವಾರಾಂತ್ಯದಲ್ಲಿ ಅದನ್ನು ತೆಗೆದುಕೊಳ್ಳುತ್ತೇವೆತಿಳಿಸಿದ್ದಾರೆ. ಹೆಚ್ಚಿನ ಕೊರೋನಾ ಸೋಂಕಿನ ಉಲ್ಬಣದ ಮಧ್ಯೆ ವೈದ್ಯಕೀಯ ಆಮ್ಲಜನಕ ಪೂರೈಕೆಗಾಗಿ ನೆರೆಯ ರಾಜ್ಯಗಳನ್ನು ಸಂಪರ್ಕಿಸಿದ್ದೇವೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಕಳೆದ ವಾರ ತಿಳಿಸಿದ್ದರು.
Follow us on Social media