ಕೋಲಾರ: ಕರ್ನಾಟದಲ್ಲಿ ಬಿಜೆಪಿಯವರು ಆಪರೇಷನ್ ಕಮಲ ಮಾಡಿದರ ಫಲವಾಗಿ ವಿಶ್ವನಾಥ್ ಅವರನ್ನು ಎಲ್ಲೂ ಇಲ್ಲದಂತೆ ಮಾಡಿ ಕೈಬಿಟ್ಟಿದ್ದಾರೆಂದು ಮಾಜಿ ಸಚಿವ ಕೃಷ್ಣಬೈರೇಗೌಡ ಲೇವಡಿ ಮಾಡಿದ್ದಾರೆ.
ಕೋಲಾರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಮಾಡುವುದಕ್ಕೆ ವಿಶ್ವನಾಥ್ ಅವರೇ ಕಾರಣ ಎಂದು ಹೇಳಲಾಗುತ್ತಿತ್ತು. ಅಂತಹ ಪಕ್ಷದ ಅಧ್ಯಕ್ಷರಾಗಿದ್ದವರನ್ನು ಕರೆದುಕೊಂಡು ಹೋಗಿ, ನಂಬಿಸಿ ಭರವಸೆ ನೀಡಿದ್ದರು. ಆದರೆ ಇವತ್ತು ಅವರನ್ನು ನಡು ನೀರಿನಲ್ಲಿ ಕೈ ಬಿಟ್ಟಿದ್ದಾರೆ ಎಂದರು.
ಬಿಜೆಪಿ ಅವರ ಅಧಿಕಾರ ದಾಹಕ್ಕೆ ಇದೇ ತಾಜಾ ಉದಾಹರಣೆ. ಸಮಯ ಬಂದಾಗ ಯಾರನ್ನ ಬೇಕಾದರು ಬಳಸಿಕೊಂಡು, ಅವರ ಕೆಲಸವನ್ನು ಸಾಧನೆ ಮಾಡಿಕೊಂಡು ಏನು ಮಾಡುತ್ತಾರೆ ಎನ್ನುವುದಕ್ಕೆ ಇದೇ ನಿದರ್ಶನ. ಬೇರೆಯವರು ಇದನ್ನು ನೋಡಿ ಕಲಿಯಬೇಕು, ಅಧಿಕಾರದ ಅಸೆಗೆ ಒಳಗಾಗುವಂತಹವರಿಗೆ ಇದೆ ನೀತಿ ಪಾಠ ಎಂದು ತಿಳಿಸಿದರು.
Follow us on Social media