ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ರಾಮಯ್ಯ ಅವರು ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಆದರೆ ಸದ್ಯ ತಾನು ಸೇಫ್ ಆಗಿರುವುದಾಗಿ ಸ್ವತಃ ನಟಿ ಜಯಶ್ರೀ ಅವರೇ ಟ್ವೀಟ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಜಯಶ್ರೀ ಅವರು ತಮ್ಮ ಫೇಸ್ ಬುಕ್ ನಲ್ಲಿ “ಖಿನ್ನತೆ ಮತ್ತು ಈ ಜಗತ್ತಿಗೆ ಗುಡ್ ಬೈ” ಎಂದು ಬರೆದುಕೊಳ್ಳುವ ಮೂಲಕ ಆತಂಕ ಸೃಷ್ಟಿಸಿದ್ದರು. ಅಲ್ಲದೆ ಈ ಪೋಸ್ಟ್ ಹಾಕಿದ ನಂತರ ಜಯಶ್ರೀ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದು, ನಟಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಪ್ಪು ಹುಳಿ ಖಾರ ಮತ್ತು ಕನ್ನಡ್ ಗೊತ್ತಿಲ್ಲ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಜಯಶ್ರೀ ಅವರು ಇಂದು ಫೇಸ್‍ಬುಕ್‍ನಲ್ಲಿ “ಖಿನ್ನತೆ ಹಾಗೂ ಈ ಜಗತ್ತಿಗೆ ವಿದಾಯ ಹೇಳುತ್ತಿದ್ದೇನೆ” ಎಂದು ಪೋಸ್ಟ್ ಮಾಡಿದ್ದರು. ಜಯಶ್ರೀ ಟ್ವೀಟ್ ಕಂಡು ಆತಂಕಕ್ಕೆ ಒಳಗಾದ ಸ್ನೇಹಿತರು ಕೂಡಲೇ ಜಯಶ್ರೀ ಅವರನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡಿದ್ದಾರೆ.
ನಟಿ ಜಯಶ್ರೀ ರಿಯಾಲಿಟಿ ಶೋ ಬಿಗ್‍ಬಾಸ್ ಮೂಲಕವೇ ಖ್ಯಾತಿ ಪಡೆದುಕೊಂಡಿದ್ದರು. ಆದರೆ ಇಂದು ಫೇಸ್‍ಬುಕ್‍ನಲ್ಲಿ “ಖಿನ್ನತೆಗೆ ಹಾಗೂ ಈ ಜಗತ್ತಿಗೆ ವಿದಾಯ ಹೇಳುತ್ತಿದ್ದೇನೆ” ಎಂದು ಪೋಸ್ಟ್ ಮಾಡಿದ್ದರು. ಜಯಶ್ರೀ ಪೋಸ್ಟ್ ಕಂಡು ಆತಂಕಕ್ಕೆ ಒಳಗಾದ ಸ್ನೇಹಿತರು ಕೂಡಲೇ ಜಯಶ್ರೀ ಅವರನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡಿದ್ದಾರೆ.
ಜಯಶ್ರೀ ಫೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಆಕೆಯೇ ತನ್ನ ಫೇಸ್‌ಬುಕ್‌ನಲ್ಲಿ ‘I’m Alright and safe!! Love you all’ ಎಂದು ಮತ್ತೊಂದು ಪೋಸ್ಟ್ ಹಾಕಿದ್ದಾರೆ. ಈಗ ಆಕೆಯ ಸ್ನೇಹಿತರು ಹಾಗೂ ಅಭಿಮಾನಿಗಳು ನಿರಾಳರಾಗಿದ್ದಾರೆ.
Follow us on Social media