ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಬೆಂಗಳೂರು ಕೋವಿಡ್ ಉಸ್ತುವಾರಿ ನೀಡಿದ ನಂತರ ಅವರ ಸಂಪುಟ ಸಹೋದ್ಯೋಗಿ ಸಚಿವ ಸುಧಾಕರ್ ಅವರಿಂದ ಟೀಕೆಗೊಳಪಟ್ಟಿದ್ದಾರೆ. ತಮಗಾಗಿರುವ ಅಸಮಾಧಾನವನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಿದ್ದಾರೆ.
ಭಾನುವಾರದ ಆಲೋಚನೆಗಳು: ನಾನು ನನ್ನ ಶಾಲೆಯ ದಿನಗಳಲ್ಲಿ ಓದಿದ ಕಥೆಯೊಂದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ, ಕಥೆಯ ನೀತಿ: ನಮ್ಮ ಕೆಲಸವನ್ನು ಆತ್ಮಸಾಕ್ಷಿಯೊಂದಿಗೆ ಮತ್ತು ಉತ್ತಮ ಉದ್ದೇಶದಿಂದ ಮಾಡೋಣ. ನಾಯಕತ್ವ ಎಂಬುದು ಒಂದು ಹುದ್ದೆಯಲ್ಲಿಲ್ಲ, ನಾವು ಮಾಡುವ ಕೆಲಸದಲ್ಲಿರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಸುಧಾಕರ್ ಅವರ ಈ ಟ್ವೀಟ್ ಬಗ್ಗೆ ಆರ್ ಅಶೋಕ್ ಅವರನ್ನು ಪ್ರಶ್ನಿಸಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ, ಡಾ. ಸುಧಾಕರ್ ಅವರ ಕುಟುಂಬಸ್ಥರಿಗೆ ಕೋರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಸುಧಾಕರ್ ಅವರು ಕೂಡ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ, ಹೀಗಾಗಿ ಬೆಂಗಳೂರು ಕೋವಿದ್ ಉಸ್ತುವಾರಿಯನ್ನು ಆರ್.ಅಶೋಕ್ ಅವರಿಗೆ ನೀಡಲಾಗಿದೆ.
ಭಾನುವಾರ ತಮ್ಮ ಕೊರೋನಾ ಪರೀಕ್ಷಾ ವರದಿಯನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ,ಈ ಮೂಲಕ ತಾವು ಯಾವುದೇ ಕ್ಷಣದಲ್ಲಾದರೂ ಕೆಲಸಕ್ಕೆ ಮರಳುವ ಸಂದೇಶ ರವಾನಿಸಿದ್ದಾರೆ. ಅಶೋಕ್ ಅವರನ್ನು ಬೆಂಗಳೂರು ಕೋವಿದ್ ಉಸ್ತುವಾರಿಯನ್ನಾಗಿ ನೇಮಿಸಿರುವುದಕ್ಕೆ ಆರೋಗ್ಯ ಸಚಿವ ಬಿ ಶ್ರಿರಾಮುಲು ಮತ್ತು ಡಿಸಿಎಂ ಅಶ್ವತ್ಥ ನಾರಾಯಣ ಕೂಡ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Follow us on Social media